Karnataka Departmental Exam 2nd Session 2024-25 ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆ


KPSC Karnataka Departmental 2nd Session Exam Notification has been released. CHeck the Details from below Article. 

ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇಲಾಖಾ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗದ (KPSC) ವೆಬ್‌ಸೈಟ್ http://www.kpsc.kar.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ವಿಧಾನಕ್ಕಾಗಿ  ನಮೂದಿಸಿರುವ ಮಾಹಿತಿಯನ್ನು ಗಮನಿಸತಕ್ಕದ್ದು

Important Dates

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ30-12-2024
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:29-01-2025
ಶುಲ್ಕ ಪಾವತಿಸಲು ಕೊನೆಯ ದಿನಾಂಕ:31-01-2025

Eligibility

a) ಈ ಕೆಳಕಂಡ ನೌಕರರು ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅ) ಸರ್ಕಾರಿ ನೌಕರರು.
ಆ) ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ನಿಗಮ/ ಮಂಡಳಿ/ ಸ್ಥಳೀಯ ಸಂಸ್ಥೆಗಳು/ ವಿಶ್ವವಿದ್ಯಾಲಯಗಳು / ಪ್ರಾಧಿಕಾರಿಗಳ ಖಾಯಂ ನೌಕರರು.
b) ಗ್ರೂಪ್-‘ಡಿ’ ನೌಕರರು ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

Special instructions for candidates

ಅ) ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಂಬಂಧ ಅಭ್ಯರ್ಥಿಗಳು ಅನುಬಂಧ-2 ರಲ್ಲಿನ ಸೂಚನೆಗಳನ್ನು ಓದಿಕೊಳ್ಳತಕ್ಕದ್ದು.
ಆ) ಸಬಾರ್ಡಿನೇಟ್ ಅಕೌಂಟ್ಸ್ ಸರ್ವೀಸಸ್ (ಎಸ್.ಎ.ಎಸ್.) ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳು ಅನುಬಂಧ-3 ರಲ್ಲಿನ ವಿಶೇಷವಾದ ಸೂಚನೆಗಳನ್ನು ಗಮನಿಸತಕ್ಕದ್ದು.
ಇ) ಇಲಾಖಾ ಪರೀಕ್ಷೆಗಳನ್ನು ಆಫ್ ಲೈನ್ ಓಎಂಆರ್ ಮಾದರಿ (Offline/type) / ಆನ್ ಲೈನ್ ಮಾದರಿಯ (Computer Based Test) ಮೂಲಕ ನಡೆಸಲಾಗುವುದು ಈ ವಿಷಯದಲ್ಲಿ ಆಯೋಗದ ತೀರ್ಮಾನವೇ ಅಂತಿಮವಾಗಿರುತ್ತದೆ.
ಈ) ಆನ್ ಲೈನ್ ಅರ್ಜಿ ಸಲ್ಲಿಸುವಾಗ ಸ್ಪಷ್ಟವಾದ ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಅಪ್ ಲೋಡ್ ಮಾಡತಕ್ಕದ್ದು ಇಲ್ಲವಾದಲ್ಲಿ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಉ) ಸಕ್ರಿಯವಾಗಿರುವ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಅರ್ಜಿಯಲ್ಲಿ ನಮೂದಿಸತಕ್ಕದ್ದು ಹಾಗೂ ಪರೀಕ್ಷಾ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೂ ಇರತಕ್ಕದ್ದು.

ವಿಷಯ ಸಂಕೇತಗಳು ಮತ್ತು ಪ್ರತಿ ವಿಷಯಕ್ಕೆ ನಿಗದಿಪಡಿಸಿದ ಶುಲ್ಕದ ವಿವರಗಳು

ಇಲಾಖಾ ಪರೀಕ್ಷೆಯ ವಿವಿಧ ವಿಷಯಗಳ ಹೆಸರುಗಳು, ಅವುಗಳ ಸಂಕೇತಗಳು ಹಾಗೂ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 6 ಸೆಲೋಸೇ 2010, ದಿನಾಂಕ: 06-08-2010 ರನ್ವಯ ನಿಗದಿಪಡಿಸಿರುವ ಶುಲ್ಕಗಳ ವಿವರಗಳನ್ನು ಅನುಬಂಧ-4 ರಲ್ಲಿ ನಮೂದಿಸಿದೆ.

ಅರ್ಜಿ ಸಲ್ಲಿಸುವ ವಿಧಾನ How to Apply

ಇಲಾಖಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗದ (KPSC) ವೆಬ್‌ಸೈಟ್ http://www.kpsc.kar.nic.in & Home Page ដ Apply Online- for various Notification ಬಟನ್ ಮೇಲೆ ಕ್ಲಿಕ್ ಮಾಡಿ ಅಥವಾ what is new ರಡಿಯಲ್ಲಿ scroll ಆಗುವ Departmental Examination- 2024-II session , Click here to apply Online Application for Departmental Examination-2024-II session ಮೇಲೆ ಕ್ಲಿಕ್ ಮಾಡಿದ ನಂತರ ಸೇವಾ ಸಿಂಧುವಿನ ಪೋರ್ಟಲ್ ಅಡಿ ಇಲಾಖಾ ಪರೀಕ್ಷೆಯ ಅರ್ಜಿ ಸಲ್ಲಿಸುವ ನಮೂನೆ ಮೂಡುತ್ತದೆ. ಈ ಅರ್ಜಿ ನಮೂನೆಯಲ್ಲಿ ಈ ಕೆಳಕಂಡ ವಿಧಾನಗಳನ್ನು ಅನುಸರಿಸಿ ಅವಶ್ಯ ವಿವರಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಿದೆ. ಅರ್ಜಿ ಸಲ್ಲಿಸುವ ಸಮಯದಲ್ಲಿಯೇ ನಿಗದಿತ ದಾಖಲೆಗಳನ್ನು ಸ್ಪಷ್ಟವಾಗಿ ಕಾಣುವಂತೆ ಕಡ್ಡಾಯವಾಗಿ ಅಪ್‌ಲೋಡ್ ಮಾಡಿ ಆನ್‌ಲೈನ್ ಮೂಲಕವೇ ಶುಲ್ಕವನ್ನು ಪಾವತಿಸಬೇಕು. ಅಂಚೆ ಮೂಲಕ/ ಖುದ್ದಾಗಿ/ ಇ-ಮೇಲ್ ಮೂಲಕ ಇತ್ಯಾದಿ ಯಾವುದೇ ರೂಪದಲ್ಲಿ ಸಲ್ಲಿಸುವ ಅರ್ಜಿ/ ಮನವಿ/ ದಾಖಲೆಗಳು/ ಶುಲ್ಕವನ್ನು ಅಭ್ಯರ್ಥಿಗೆ ಯಾವುದೇ ಮುನ್ಸೂಚನೆ ನೀಡದೆ ತಿರಸ್ಕರಿಸಲಾಗುವುದು.

PDF
Detailed Notification for Karnakata 2nd Session Departmental Exam 2024-25
Click Here
Share This Article

See us first when you search on Google. Click Here

Schools 360

Content Writer