ಕರ್ನಾಟಕ SA-2 ಪರೀಕ್ಷಾ ವೇಳಾಪಟ್ಟಿ 2026: ಶಾಲಾ ಶಿಕ್ಷಣ ಇಲಾಖೆಯು 2025-26ನೇ ಸಾಲಿನ 1 ರಿಂದ 09 ನೇ ತರಗತಿಯ ಎರಡನೇ ಸಂಕಲನಾತ್ಮಕ ಮೌಲ್ಯಾಂಕನ (SA-2 / Summative Assessment-2) ಪರೀಕ್ಷೆಗಳನ್ನು ನಡೆಸುವ ಬಗ್ಗೆ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಏಕರೂಪವಾಗಿ ಈ ಕೆಳಕಂಡ ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳನ್ನು ನಡೆಸಲು ಸೂಚಿಸಲಾಗಿದೆ. ಪರೀಕ್ಷೆ ಮುಗಿದ ನಂತರ ಮೌಲ್ಯಮಾಪನ ಕಾರ್ಯವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ನಿಯಮಾನುಸಾರ SATS ನಲ್ಲಿ ವಿದ್ಯಾರ್ಥಿಗಳ ಗ್ರೇಡ್‌ಗಳನ್ನು ದಾಖಲಿಸಲು ನಿರ್ದೇಶಿಸಲಾಗಿದೆ.
ವೇಳಾಪಟ್ಟಿಯ ಸಂಪೂರ್ಣ ವಿವರಗಳು ಕೆಳಗಿನಂತಿವೆ:
1 ರಿಂದ 7ನೇ ತರಗತಿ ಲಿಖಿತ ಹಾಗೂ ಮೌಖಿಕ ಪರೀಕ್ಷೆಯ ವೇಳಾಪಟ್ಟಿ
ಸೂಚನೆ: ಮೌಖಿಕ ಪರೀಕ್ಷೆಯನ್ನು ಲಿಖಿತ ಪರೀಕ್ಷೆಯ ದಿನದಂದೇ ಮಧ್ಯಾಹ್ನ 12:00 ರಿಂದ 1:00 ರವರೆಗೆ ವಿಷಯವಾರು ನಡೆಸಲಾಗುವುದು.
| ದಿನಾಂಕ | ವಾರ | ವಿಷಯ | ಸಮಯ (ಲಿಖಿತ ಪರೀಕ್ಷೆ) |
| 24.03.2026 | ಮಂಗಳವಾರ | ಪ್ರಥಮ ಭಾಷೆ | ಬೆಳಗ್ಗೆ 10:00 ರಿಂದ 11:30 ರವರೆಗೆ |
| 26.03.2026 | ಗುರುವಾರ | ದೈಹಿಕ ಶಿಕ್ಷಣ/ ವೃತ್ತಿ ಶಿಕ್ಷಣ/ ಚಿತ್ರಕಲೆ/ ಸಂಗೀತ/ ಮೌಲ್ಯ ಶಿಕ್ಷಣ | ಬೆಳಗ್ಗೆ 9:00 ರಿಂದ 10:30 ರವರೆಗೆ |
| 27.03.2026 | ಶುಕ್ರವಾರ | ಗಣಿತ | ಬೆಳಗ್ಗೆ 10:00 ರಿಂದ 11:30 ರವರೆಗೆ |
| 28.03.2026 | ಶನಿವಾರ | ದ್ವಿತೀಯ ಭಾಷೆ | ಬೆಳಗ್ಗೆ 10:00 ರಿಂದ 11:30 ರವರೆಗೆ |
| 30.03.2026 | ಸೋಮವಾರ | ಪರಿಸರ ಅಧ್ಯಯನ / ವಿಜ್ಞಾನ | ಬೆಳಗ್ಗೆ 10:00 ರಿಂದ 11:30 ರವರೆಗೆ |
| 01.04.2026 | ಬುಧವಾರ | ತೃತೀಯ ಭಾಷೆ | ಬೆಳಗ್ಗೆ 10:00 ರಿಂದ 11:30 ರವರೆಗೆ |
| 02.04.2026 | ಗುರುವಾರ | ಸಮಾಜ ವಿಜ್ಞಾನ | ಬೆಳಗ್ಗೆ 10:00 ರಿಂದ 11:30 ರವರೆಗೆ |
8ನೇ ಮತ್ತು 9ನೇ ತರಗತಿಯ ಪರೀಕ್ಷೆಯ ವೇಳಾಪಟ್ಟಿ
| ದಿನಾಂಕ | ವಾರ | ವಿಷಯ | 8ನೇ ತರಗತಿಯ ಸಮಯ | 9ನೇ ತರಗತಿಯ ಸಮಯ |
| 24.03.2026 | ಮಂಗಳವಾರ | ಪ್ರಥಮ ಭಾಷೆ | ಬೆ: 10:00 ರಿಂದ 11:30 ರವರೆಗೆ | ಬೆ: 10:00 ರಿಂದ ಮ: 01:15 ರವರೆಗೆ |
| 26.03.2026 | ಗುರುವಾರ | ದೈಹಿಕ ಶಿಕ್ಷಣ/ ವೃತ್ತಿ ಶಿಕ್ಷಣ/ ಚಿತ್ರಕಲೆ/ ಸಂಗೀತ/ ಮೌಲ್ಯ ಶಿಕ್ಷಣ | ಬೆ: 10:00 ರಿಂದ 11:30 ರವರೆಗೆ | ಬೆ: 10:00 ರಿಂದ 11:30 ರವರೆಗೆ |
| 27.03.2026 | ಶುಕ್ರವಾರ | ದ್ವಿತೀಯ ಭಾಷೆ | ಬೆ: 10:00 ರಿಂದ 11:30 ರವರೆಗೆ | ಬೆ: 10:00 ರಿಂದ ಮ: 01:00 ರವರೆಗೆ |
| 30.03.2026 | ಸೋಮವಾರ | ಗಣಿತ | ಮ: 1:30 ರಿಂದ 3:00 ರವರೆಗೆ | ಮ: 01:30 ರಿಂದ 4:45 ರವರೆಗೆ |
| 01.04.2026 | ಬುಧವಾರ | ವಿಜ್ಞಾನ | ಮ: 1:30 ರಿಂದ 3:00 ರವರೆಗೆ | ಮ: 01:30 ರಿಂದ 4:45 ರವರೆಗೆ |
| 04.04.2026 | ಶನಿವಾರ | ತೃತೀಯ ಭಾಷೆ ಹಾಗೂ ಎನ್.ಎಸ್.ಕ್ಯೂ.ಎಫ್ ವಿಷಯಗಳು | ಮ: 1:30 ರಿಂದ 3:00 ರವರೆಗೆ | ಮ: 01:30 ರಿಂದ 4:45 ರವರೆಗೆ |
| 06.04.2026 | ಸೋಮವಾರ | ಸಮಾಜ ವಿಜ್ಞಾನ | ಮ: 1:30 ರಿಂದ 3:00 ರವರೆಗೆ | ಮ: 01:30 ರಿಂದ 4:45 ರವರೆಗೆ |
ವಿದ್ಯಾರ್ಥಿಗಳು ಮತ್ತು ಪೋಷಕರು ಈ ಮೇಲಿನ ವೇಳಾಪಟ್ಟಿಯನ್ನು ಗಮನಿಸಿ ಪರೀಕ್ಷೆಗೆ ಸಿದ್ಧತೆ ನಡೆಸಬಹುದಾಗಿದೆ.
Download Karnataka SA2 Timetable 2026- Click Here








