ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ Karnataka SC ST Free Pre-Exam Coaching for KAS, Banking, RRB, SSC, Group-C and Judicial Services | ಕೆ.ಎ.ಎಸ್, ಬ್ಯಾಂಕಿಂಗ್, ಆರ್.ಆರ್.ಬಿ, ಎಸ್.ಎಸ್.ಸಿ, ಗ್ರೂಪ್-ಸಿ ಮತ್ತು ನ್ಯಾಯಾಂಗ ಸೇವೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪೂರ್ವಭಾವಿ ತರಬೇತಿ
UPSC, KAS, Banking, RRB, SSC, Group C and Judiciary Services Syllabus
⭐ SC / ST ವಿದ್ಯಾರ್ಥಿಗಳಿಗಾಗಿ KAS / Banking / IBPS / SSC / Judicial Services & Group-C Exam ಗೆ Free Coaching ನೀಡಲು ಆಯ್ಕೆಗಾಗಿ 2025 ಮಾಚ್೯ ನಲ್ಲಿ ನಡೆಸುವ ಪ್ರವೇಶ ಪರೀಕ್ಷೆಯ ಪಠ್ಯಕ್ರಮ (Syllabus) ವನ್ನು ಇಲಾಖೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಇದೀಗ ಪ್ರಕಟಿಸಿದೆ.!!
⭐ 2025 ಜನವರಿ-12 ರಂದು SC & ST ಅಭ್ಯರ್ಥಿಗಳಿಗಾಗಿ ನಡೆದ IAS Free Coaching (FC) ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾರ್ಚ್ 3ರಂದು Document Verification & ಕೌನ್ಸೆಲಿಂಗ್ ಪ್ರಕ್ರಿಯೆಯು ನಡೆಯಲಿದ್ದು, DVಗೆ ಹೋಗವಾಗ ಅರ್ಜಿ ಸ್ವೀಕೃತಿ, ಆಧಾರ್ ಕಾರ್ಡ್, Caste & Income Certificate, ಮೀಸಲಾತಿ ಕೋರಿದ ದಾಖಲೆಗಳು, SSLC & Degree ಎಲ್ಲಾ ಸೆಮಿಸ್ಟರ್ ಪದವಿ ಅಂಕಪಟ್ಟಿಗಳು, 3 ಪಾಸ್ ಪೋರ್ಟ್ Size Photos ತಗೊಂಡು ಹೋಗಿ.!!
⭐ Counseling ಮುಕ್ತಾಯವಾದ ನಂತರ, ಖಾಲಿ ಉಳಿದ ಸ್ಥಾನಗಳಿಗಾಗಿ, ಮೆರಿಟ್ ಪಟ್ಟಿಯಲ್ಲಿನ ನಂತರದ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಸಲುವಾಗಿ, 2ನೇ ಸುತ್ತಿನ ಕೌನ್ಸೆಲಿಂಗ್ ನಡೆಸಲಾಗುತ್ತದೆ, ನಿರೀಕ್ಷಿಸಿ.!!
⭐ UPSC ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಎಲ್ಲಾ ಸಂಸ್ಥೆಗಳಲ್ಲಿಯೂ ಒಟ್ಟು 9 ತಿಂಗಳ ಪ್ರಿಲಿಮ್ಸ್ ಕಮ್ ಮೇನ್ಸ್ ತರಬೇತಿಯನ್ನು ನೀಡಲಾಗುತ್ತದೆ.!!
Free Coaching ಪಠ್ಯಕ್ರಮ ಡೌನ್ಲೋಡ್ ಮಾಡಿಕೊಳ್ಳಲು.
Click Here To Download Syllabus File
( ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಜಿದಾರರಿಗೆ ಮಾತ್ರ )
2024-25ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ. ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಕೆ.ಎ.ಎಸ್/ಗ್ರೂಪ್-ಸಿ/ಬ್ಯಾಂಕಿಂಗ್/ಎಸ್ ಎಸ್ ಸಿ /ಆರ್ ಆರ್ ಬಿ/ನ್ಯಾಯಾಂಗ ಸೇವೆ ಪೂರ್ವಭಾವಿ ತರಬೇತಿಗೆ ಆಯ್ಕೆ ಮಾಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸುವ ಬಗ್ಗೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2025ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ, ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಕೆ.ಎ.ಎಸ್/ಗ್ರೂಪ್-ಸಿ/ಬ್ಯಾಂಕಿಂಗ್/ಎಸ್ ಎಸ್ ಸಿ /ಆರ್ ಆರ್ ಬಿ/ನ್ಯಾಯಾಂಗ ಸೇವೆ ಪೂರ್ವಭಾವಿ ತರಬೇತಿ ನೀಡಲು ಉದ್ದೇಶಿಸಲಾಗಿದೆ.
ಕೆ.ಎ.ಎಸ್/ಗ್ರೂಪ್-ಸಿ/ಬ್ಯಾಂಕಿಂಗ್/ಎಸ್ ಎಸ್ ಸಿ /ಆರ್ ಆರ್ ಬಿ/ನ್ಯಾಯಾಂಗ ಸೇವೆ ಪೂರ್ವಭಾವಿ ತರಬೇತಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನಿಗಧಿತ ಗುರಿಗನುಗುಣವಾಗಿ ಆಯ್ಕೆ ಮಾಡಲಾಗುತ್ತದೆ. ಸದರಿ ಅಭ್ಯರ್ಥಿಗಳಿಗೆ ಶಿಷ್ಯವೇತನವನ್ನು ಸರ್ಕಾರದಿಂದ ಮಂಜೂರಾದ ದರದಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಮತ್ತು ತರಬೇತಿ ವೆಚ್ಚವನ್ನು ತರಬೇತಿ ಸಂಸ್ಥೆಗಳಿಗೆ ಪಾವತಿಸಲಾಗುವುದು.
ಕೆ.ಎ.ಎಸ್/ಗ್ರೂಪ್-ಸಿ/ಬ್ಯಾಂಕಿಂಗ್/ಎಸ್ ಎಸ್ ಸಿ /ಆರ್ ಆರ್ ಬಿ/ನ್ಯಾಯಾಂಗ ಸೇವೆ ಪೂರ್ವಭಾವಿ ತರಬೇತಿಯ ಅವಧಿ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿ ಸಲ್ಲಿಸಬೇಕಾದ ವೆಬ್‌ಸೈಟ್ ವಿಳಾಸ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವಿವರಗಳು ಈ ಕೆಳಕಂಡಂತಿದೆ.