Karnataka SA-2 Timetable 2026 Revised; 6-9 Class SA-2 ಪರೀಕ್ಷಾ ವೇಳಾಪಟ್ಟಿ


ಕರ್ನಾಟಕ SA-2 ಪರೀಕ್ಷಾ ವೇಳಾಪಟ್ಟಿ 2026: ಶಾಲಾ ಶಿಕ್ಷಣ ಇಲಾಖೆಯು 2025-26ನೇ ಸಾಲಿನ 06 ರಿಂದ 09 ನೇ ತರಗತಿಯ ಎರಡನೇ ಸಂಕಲನಾತ್ಮಕ ಮೌಲ್ಯಾಂಕನ (SA-2 / Summative Assessment-2) ಪರೀಕ್ಷೆಗಳನ್ನು ನಡೆಸುವ ಬಗ್ಗೆ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಏಕರೂಪವಾಗಿ ಈ ಕೆಳಕಂಡ ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳನ್ನು ನಡೆಸಲು ಸೂಚಿಸಲಾಗಿದೆ. ಪರೀಕ್ಷೆ ಮುಗಿದ ನಂತರ ಮೌಲ್ಯಮಾಪನ ಕಾರ್ಯವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ನಿಯಮಾನುಸಾರ SATS ನಲ್ಲಿ ವಿದ್ಯಾರ್ಥಿಗಳ ಗ್ರೇಡ್‌ಗಳನ್ನು ದಾಖಲಿಸಲು ನಿರ್ದೇಶಿಸಲಾಗಿದೆ.

ವೇಳಾಪಟ್ಟಿಯ ಸಂಪೂರ್ಣ ವಿವರಗಳು ಕೆಳಗಿನಂತಿವೆ:

6ನೇ ಮತ್ತು 7ನೇ ತರಗತಿ ಲಿಖಿತ ಹಾಗೂ ಮೌಖಿಕ ಪರೀಕ್ಷೆಯ ವೇಳಾಪಟ್ಟಿ

ಸೂಚನೆ: ಮೌಖಿಕ ಪರೀಕ್ಷೆಯನ್ನು ಲಿಖಿತ ಪರೀಕ್ಷೆಯ ದಿನದಂದೇ ಮಧ್ಯಾಹ್ನ 12:00 ರಿಂದ 1:00 ರವರೆಗೆ ವಿಷಯವಾರು ನಡೆಸಲಾಗುವುದು.

ದಿನಾಂಕವಾರವಿಷಯಸಮಯ (ಲಿಖಿತ ಪರೀಕ್ಷೆ)
24.03.2026ಮಂಗಳವಾರಪ್ರಥಮ ಭಾಷೆಬೆಳಗ್ಗೆ 11:30 ರಿಂದ 1:00 ರವರೆಗೆ
26.03.2026ಗುರುವಾರಗಣಿತಬೆಳಗ್ಗೆ 11:30 ರಿಂದ 1:00 ರವರೆಗೆ
27.03.2026ಶುಕ್ರವಾರದ್ವಿತೀಯ ಭಾಷೆಬೆಳಗ್ಗೆ 11:30 ರಿಂದ 1:00 ರವರೆಗೆ
01.04.2026ಬುಧವಾರ

ಸಮಾಜ ವಿಜ್ಞಾನ

ಬೆಳಗ್ಗೆ 11:30 ರಿಂದ 1:00 ರವರೆಗೆ
04.04.2026ಶನಿವಾರಪರಿಸರ ಅಧ್ಯಯನ / ವಿಜ್ಞಾನಬೆಳಗ್ಗೆ 11:30 ರಿಂದ 1:00 ರವರೆಗೆ
06.04.2026ಸೋಮವಾರತೃತೀಯ ಭಾಷೆಬೆಳಗ್ಗೆ 11:30 ರಿಂದ 1:00 ರವರೆಗೆ

8ನೇ ಮತ್ತು 9ನೇ ತರಗತಿಯ ಪರೀಕ್ಷೆಯ ವೇಳಾಪಟ್ಟಿ

ದಿನಾಂಕವಾರವಿಷಯ8ನೇ ತರಗತಿಯ ಸಮಯ9ನೇ ತರಗತಿಯ ಸಮಯ
24.03.2026ಮಂಗಳವಾರಪ್ರಥಮ ಭಾಷೆಬೆ: 11:00 ರಿಂದ 1:00 ರವರೆಗೆಬೆ: 11:00 ರಿಂದ ಮ: 02:15 ರವರೆಗೆ
26.03.2026ಗುರುವಾರಸಮಾಜ ವಿಜ್ಞಾನಬೆ: 11:00 ರಿಂದ 1:00 ರವರೆಗೆಬೆ: 11:00 ರಿಂದ ಮ: 02:15 ರವರೆಗೆ
27.03.2026ಶುಕ್ರವಾರದ್ವಿತೀಯ ಭಾಷೆಬೆ: 11:00 ರಿಂದ 1:00 ರವರೆಗೆಬೆ: 11:00 ರಿಂದ ಮ: 02:00 ರವರೆಗೆ
01.04.2026ಬುಧವಾರಗಣಿತಬೆ: 11:00 ರಿಂದ 1:00 ರವರೆಗೆಬೆ: 11:00 ರಿಂದ ಮ: 02:15 ರವರೆಗೆ
04.04.2026ಶನಿವಾರವಿಜ್ಞಾನಬೆ: 11:00 ರಿಂದ 1:00 ರವರೆಗೆಬೆ: 11:00 ರಿಂದ ಮ: 02:15 ರವರೆಗೆ
06.04.2026ಸೋಮವಾರತೃತೀಯ ಭಾಷೆ ಬೆ: 11:00 ರಿಂದ 1:00 ರವರೆಗೆಬೆ: 11:00 ರಿಂದ ಮ: 02:00 ರವರೆಗೆ

ವಿದ್ಯಾರ್ಥಿಗಳು ಮತ್ತು ಪೋಷಕರು ಈ ಮೇಲಿನ ವೇಳಾಪಟ್ಟಿಯನ್ನು ಗಮನಿಸಿ ಪರೀಕ್ಷೆಗೆ ಸಿದ್ಧತೆ ನಡೆಸಬಹುದಾಗಿದೆ.

Download Karnataka SA2 Timetable 2026- Click Here

Schools 360

Content Writer